ಕೆಎಂಎಫ್ ಶಿಮುಲ್ ನೇಮಕಾತಿ 2026
ನಮಸ್ಕಾರ ಸ್ನೇಹಿತರೆ, ಕೆಲಸ ಹುಡುಕುತ್ತಿರುವವರಿಗೊಂದು ಭರ್ಜರಿ ಗುಡ್ ನ್ಯೂಸ್! ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟದಲ್ಲಿ (SHIMUL) ಕೆಲಸ ಮಾಡುವ ಆಸೆ ಇದೆಯಾ? ಹಾಗಾದ್ರೆ ಈ ಚಾನ್ಸ್ ಮಿಸ್ ಮಾಡ್ಕೋಬೇಡಿ.
ಏನಿದು ಸುದ್ದಿ?
ಹಿಂದೆಯೇ ಕೆಎಂಎಫ್ ಈ ಹುದ್ದೆಗಳಿಗೆ ನೋಟಿಫಿಕೇಶನ್ ಹೊರಡಿಸಿತ್ತು. ಆದರೆ ತುಂಬಾ ಜನರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಇದನ್ನೇ ಗಮನದಲ್ಲಿಟ್ಟುಕೊಂಡು ಈಗ ಅರ್ಜಿ ಸಲ್ಲಿಸುವ ದಿನಾಂಕವನ್ನು ಫೆಬ್ರವರಿ 21, 2026 ರವರೆಗೆ ವಿಸ್ತರಣೆ ಮಾಡಲಾಗಿದೆ. ಅಂದರೆ ನಿಮಗೆ ಮತ್ತೊಂದು ಸುವರ್ಣ ಅವಕಾಶ ಸಿಕ್ಕಿದೆ!
ಯಾವೆಲ್ಲಾ ಹುದ್ದೆಗಳಿವೆ ಗೊತ್ತಾ?
ಒಟ್ಟು 194 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಆಫೀಸ್ ಕೆಲಸದಿಂದ ಹಿಡಿದು ಫೀಲ್ಡ್ ಕೆಲಸದವರೆಗೆ ವೆರೈಟಿ ಹುದ್ದೆಗಳಿವೆ:
- ಅಸಿಸ್ಟೆಂಟ್ ಮ್ಯಾನೇಜರ್: 17 ಹುದ್ದೆಗಳು (ಇಲ್ಲಿ ಸಂಬಳ ಸಖತ್ತಾಗಿದೆ!)
- ಜೂನಿಯರ್ ಟೆಕ್ನಿಷಿಯನ್: ಬರೋಬ್ಬರಿ 50 ಹುದ್ದೆಗಳು.
- ಇದಲ್ಲದೆ ಅಡ್ಮಿನ್ ಅಸಿಸ್ಟೆಂಟ್, ಅಕೌಂಟ್ಸ್ ಅಸಿಸ್ಟೆಂಟ್, ಕೆಮಿಸ್ಟ್ ಮತ್ತು ಐಟಿಐ ಮಾಡಿದವರಿಗಾಗಿ ತಾಂತ್ರಿಕ ಹುದ್ದೆಗಳು ಇವೆ.
ವಿದ್ಯಾರ್ಹತೆ ಏನಿರಬೇಕು?
ಇಲ್ಲಿ ಎಲ್ಲರಿಗೂ ಅವಕಾಶ ಇದೆ. ನೀವು ಕೇವಲ 10ನೇ ತರಗತಿ ಪಾಸಾಗಿದ್ದರೂ ಸಾಕು ಅಥವಾ ಐಟಿಐ, ಡಿಗ್ರಿ, ಇಂಜಿನಿಯರಿಂಗ್ (BE/B.Tech), ಬಿ.ಎಸ್ಸಿ ಇಲ್ಲವೇ ಎಂಬಿಎ ಮಾಡಿದ್ದರೂ ಇಲ್ಲಿ ನಿಮಗೊಂದು ಹುದ್ದೆ ಕಾದಿದೆ.
ವಯಸ್ಸಿನ ಮಿತಿ:
ಕನಿಷ್ಠ 18 ವರ್ಷ ಆಗಿರಬೇಕು. ಜನರಲ್ ಕ್ಯಾಟಗರಿಯವರಿಗೆ 35 ವರ್ಷದವರೆಗೆ ಅವಕಾಶ ಇದೆ. ಇನ್ನುಳಿದ ಮೀಸಲಾತಿ ಇರುವ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ವಯಸ್ಸಿನಲ್ಲಿ ಸಡಿಲಿಕೆ ಇರುತ್ತದೆ.
ಯಾವ ಹುದ್ದೆಗೆ ಯಾರು ಅಪ್ಲೈ ಮಾಡಬಹುದು?
ನೋಡಿ ಗೆಳೆಯರೇ, ಸುಮ್ಮನೆ ಯಾವುದೋ ಒಂದು ಕೆಲಸಕ್ಕೆ ಅರ್ಜಿ ಹಾಕುವ ಬದಲು, ನಿಮ್ಮ ಓದಿಗೆ ತಕ್ಕಂತೆ ಇಲ್ಲಿರುವ ಹುದ್ದೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಆಗ ನಿಮಗೆ ಕೆಲಸ ಸಿಗುವ ಚಾನ್ಸ್ ಜಾಸ್ತಿ ಇರುತ್ತೆ.
1. ಅಸಿಸ್ಟೆಂಟ್ ಮ್ಯಾನೇಜರ್ (Assistant Manager)
ನಿಮ್ಮ ಹತ್ತಿರ ವೆಟರ್ನರಿ ಸೈನ್ಸ್ (B.V.Sc) ಅಥವಾ ಬಿ.ಇ (B.E) ಪದವಿ ಇದೆಯಾ? ಹಾಗಾದ್ರೆ ಈ ಹುದ್ದೆ ನಿಮಗಾಗಿ. ಈ ಹುದ್ದೆಗೆ ಸಂಬಳ ತುಂಬಾ ಚೆನ್ನಾಗಿದೆ. ಜವಾಬ್ದಾರಿಗಳು ಕೂಡ ಹೆಚ್ಚಿರುತ್ತವೆ, ಹಾಗಾಗಿ ಲೀಡರ್‌ಶಿಪ್ ಗುಣ ಇರುವವರಿಗೆ ಇದು ಹೇಳಿ ಮಾಡಿಸಿದ ಕೆಲಸ.
2. ಜೂನಿಯರ್ ಟೆಕ್ನಿಷಿಯನ್ (Junior Technician)
ಇಲ್ಲಿ ಅತಿ ಹೆಚ್ಚು ಅಂದರೆ 50 ಹುದ್ದೆಗಳು ಇವೆ. ಯಾರಿಗೆಲ್ಲಾ ಐಟಿಐ (ITI) ಮುಗಿದಿದೆಯೋ ಅವರಿಗೆ ಇದು ಲಕ್ಕಿ ಚಾನ್ಸ್. ಎಲೆಕ್ಟ್ರಿಷಿಯನ್, ಫಿಟ್ಟರ್ ಮುಂತಾದ ಟ್ರೇಡ್‌ಗಳಲ್ಲಿ ಕೆಲಸ ಮಾಡಿದವರಿಗೆ ಇಲ್ಲಿ ಆದ್ಯತೆ ಸಿಗುತ್ತದೆ. ಕೆಎಂಎಫ್‌ನಂತಹ ದೊಡ್ಡ ಸಂಸ್ಥೆಯಲ್ಲಿ ತಾಂತ್ರಿಕ ಕೆಲಸ ಮಾಡುವುದು ಒಂದು ಒಳ್ಳೆ ಅನುಭವ.
3. ವಿಸ್ತರಣಾಧಿಕಾರಿ (Extension Officer)
ಒಕ್ಕೂಟದ ಹಾಲು ಸಂಗ್ರಹಣೆ ಮತ್ತು ಹೈನುಗಾರಿಕೆ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕೆಲಸ ಇದು. ಬಿ.ಎಸ್ಸಿ (ಅಗ್ರಿಕಲ್ಚರ್) ಅಥವಾ ಪಶುಸಂಗೋಪನೆಗೆ ಸಂಬಂಧಿಸಿದ ಡಿಗ್ರಿ ಮಾಡಿರುವವರಿಗೆ ಇಲ್ಲಿ ಡಿಮ್ಯಾಂಡ್ ಇರುತ್ತೆ. ಜನರ ಜೊತೆ ಬೆರೆಯುವ ಆಸಕ್ತಿ ಇದ್ದರೆ ಈ ಹುದ್ದೆಗೆ ಟ್ರೈ ಮಾಡಿ.
4. ಅಡ್ಮಿನ್ ಮತ್ತು ಅಕೌಂಟ್ಸ್ ಅಸಿಸ್ಟೆಂಟ್
ಯಾರಿಗೆಲ್ಲಾ ಕಾಮರ್ಸ್ (B.Com) ಅಥವಾ ಯಾವುದಾದರೂ ಒಂದು ಡಿಗ್ರಿ ಮುಗಿದಿದೆಯೋ ಅವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಲೆಕ್ಕಪತ್ರಗಳನ್ನು ನೋಡಿಕೊಳ್ಳುವುದು ಮತ್ತು ಆಫೀಸ್ ಕೆಲಸಗಳನ್ನು ಮ್ಯಾನೇಜ್ ಮಾಡುವುದು ಇವರ ಮುಖ್ಯ ಕೆಲಸ.
ಸಂಬಳದ ಪ್ಯಾಕೇಜ್ ಹೇಗಿರುತ್ತೆ?
ಕೆಎಂಎಫ್‌ನಲ್ಲಿ ಕೆಲಸ ಅಂದರೆ ಅದು ಕೇವಲ ಕೆಲಸವಲ್ಲ, ಒಂದು ಗೌರವದ ವಿಷಯ. ಸಂಬಳ ಕೂಡ ಅಷ್ಟೇ ಆಕರ್ಷಕವಾಗಿದೆ:
- ಟಾಪ್ ಲೆವೆಲ್ ಹುದ್ದೆಗಳಿಗೆ: ನೀವು ಸಹಾಯಕ ವ್ಯವಸ್ಥಾಪಕರಾಗಿ ಆಯ್ಕೆಯಾದರೆ ಸುಮಾರು 1.55 ಲಕ್ಷ ರೂ. ವರೆಗೂ ಸಂಬಳ ಪಡೆಯುವ ಅವಕಾಶವಿದೆ!
- ಇತರೆ ಹುದ್ದೆಗಳಿಗೆ: ಅನುಭವ ಮತ್ತು ಹುದ್ದೆಯ ಆಧಾರದ ಮೇಲೆ ಆರಂಭಿಕ ಹಂತದಲ್ಲೇ ಒಂದು ಒಳ್ಳೆ ಪ್ಯಾಕೇಜ್ ಸಿಗುತ್ತದೆ. ಸರ್ಕಾರಿ ಸೌಲಭ್ಯಗಳ ಜೊತೆಗೆ ಕೆಎಂಎಫ್‌ನ ಭತ್ಯೆಗಳೂ ಇರುತ್ತವೆ.
ಅರ್ಜಿ ಸಲ್ಲಿಸುವುದು ಹೇಗೆ?
ಬಹಳಷ್ಟು ಜನ ಸೈಬರ್ ಸೆಂಟರ್‌ಗೆ ಹೋಗಿ ಹಣ ಖರ್ಚು ಮಾಡ್ತಾರೆ, ಆದ್ರೆ ನಿಮ್ಮ ಹತ್ತಿರ ಸ್ಮಾರ್ಟ್‌ಫೋನ್ ಇದ್ರೆ ನೀವೇ ಸುಲಭವಾಗಿ ಈ ಕೆಲಸ ಮುಗಿಸಬಹುದು. ನಾನು ಹೇಳೋ ಈ ಸ್ಟೆಪ್ಸ್ ಫಾಲೋ ಮಾಡಿ:
⭐ಅಫೀಶಿಯಲ್ ವೆಬ್‌ಸೈಟ್‌ಗೆ ಹೋಗಿ
ಮೊದಲು ನಿಮ್ಮ ಫೋನ್‌ನಲ್ಲಿ ಗೂಗಲ್ ಓಪನ್ ಮಾಡಿ www.shimul.coop ಅಂತ ಟೈಪ್ ಮಾಡಿ. ಇದು ಶಿಮುಲ್‌ನ ಅಧಿಕೃತ ವೆಬ್‌ಸೈಟ್. ಇಲ್ಲಿ ‘Recruitment 2026’ ಅನ್ನೋ ಲಿಂಕ್ ಕಾಣಿಸುತ್ತೆ, ಅದರ ಮೇಲೆ ಕ್ಲಿಕ್ ಮಾಡಿ.
⭐ರಿಜಿಸ್ಟ್ರೇಷನ್ ಮಾಡಿಕೊಳ್ಳಿ
ನೇರವಾಗಿ ಅಪ್ಲೈ ಮಾಡೋಕೆ ಆಗಲ್ಲ, ಫಸ್ಟ್ ನೀವು ನಿಮ್ಮ ಹೆಸರು, ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಕೊಟ್ಟು ರಿಜಿಸ್ಟರ್ ಮಾಡ್ಕೋಬೇಕು. ಆಗ ನಿಮ್ಮ ಫೋನ್‌ಗೆ ಒಂದು ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬರುತ್ತೆ.
⭐ಮಾಹಿತಿ ತುಂಬಿ
ಈಗ ಲಾಗಿನ್ ಆಗಿ ನಿಮ್ಮ ಅಪ್ಪ-ಅಮ್ಮನ ಹೆಸರು, ನಿಮ್ಮ ಹುಟ್ಟಿದ ದಿನಾಂಕ ಮತ್ತು ಅಡ್ರೆಸ್ ಅನ್ನು ಸರಿಯಾಗಿ ಎಂಟ್ರಿ ಮಾಡಿ. ನೆನಪಿಡಿ, ನಿಮ್ಮ 10ನೇ ತರಗತಿ ಮಾರ್ಕ್ಸ್ ಕಾರ್ಡ್‌ನಲ್ಲಿ ಹೇಗಿದೆಯೋ ಹಾಗೆಯೇ ಇರಲಿ.
ಯಾವ ಹುದ್ದೆ ಬೇಕು ಅಂತ ಸೆಲೆಕ್ಟ್ ಮಾಡಿ
ಅಲ್ಲಿ ಹುದ್ದೆಗಳ ಲಿಸ್ಟ್ ಇರುತ್ತೆ. ನೀವು ಯಾವ ಕೆಲಸಕ್ಕೆ ಅಪ್ಲೈ ಮಾಡಬೇಕು ಅಂದುಕೊಂಡಿದ್ದೀರೋ (ಉದಾಹರಣೆಗೆ ಜೂನಿಯರ್ ಟೆಕ್ನಿಷಿಯನ್ ಅಥವಾ ಅಡ್ಮಿನ್ ಅಸಿಸ್ಟೆಂಟ್) ಅದನ್ನೇ ಆಯ್ಕೆ ಮಾಡಿ.
ರೆಡಿ ಇಟ್ಟುಕೊಳ್ಳಬೇಕಾದ ದಾಖಲೆಗಳು (Documents Checklist)
ಅರ್ಜಿ ಹಾಕೋಕೆ ಕೂರೋಕಿಂತ ಮುಂಚೆ ಇವುಗಳನ್ನೆಲ್ಲಾ ಸ್ಕ್ಯಾನ್ ಮಾಡಿ ಇಟ್ಕೊಳ್ಳಿ:
- ಫೋಟೋ ಮತ್ತು ಸಹಿ: ನಿಮ್ಮ ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ಒಂದು ಬಿಳಿ ಪೇಪರ್ ಮೇಲೆ ಮಾಡಿರೋ ಸೈನ್.
- ಅಂಕಪಟ್ಟಿಗಳು: 10ನೇ ತರಗತಿ ಅಥವಾ ನೀವು ಮಾಡಿರೋ ಡಿಗ್ರಿ/ಐಟಿಐ ಮಾರ್ಕ್ಸ್ ಕಾರ್ಡ್.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ: ನಿಮಗೆ ವಯೋಮಿತಿ ಸಡಿಲಿಕೆ ಅಥವಾ ಮೀಸಲಾತಿ ಬೇಕಂದ್ರೆ ಇದು ತುಂಬಾನೇ ಇಂಪಾರ್ಟೆಂಟ್.
- ಗುರುತಿನ ಚೀಟಿ: ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ.
ಸೆಲೆಕ್ಷನ್ ಪ್ರಕ್ರಿಯೆ ಮತ್ತು ಪರೀಕ್ಷೆ ಹೇಗಿರುತ್ತೆ?
ಅರ್ಜಿ ಹಾಕಿ ಸುಮ್ಮನೆ ಕೂತರೆ ಸಾಲದು, ಈ ಕೆಲಸ ನಿಮ್ಮದಾಗಬೇಕೆಂದರೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಕೆಎಂಎಫ್ ಶಿಮುಲ್‌ನಲ್ಲಿ ಸಾಮಾನ್ಯವಾಗಿ ಎರಡು ಹಂತಗಳಲ್ಲಿ ಆಯ್ಕೆ ನಡೆಯುತ್ತದೆ.
1. ಲಿಖಿತ ಪರೀಕ್ಷೆ (Written Exam)
ಹೆಚ್ಚಿನ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ನಿಮ್ಮ ವಿಷಯ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನವನ್ನೂ ಪರೀಕ್ಷಿಸಲಾಗುತ್ತದೆ.
- ಸಿಲೆಬಸ್ ಏನ ಇರುತ್ತೆ?: ನೀವು ಯಾವ ಹುದ್ದೆಗೆ ಅಪ್ಲೈ ಮಾಡಿದ್ದೀರೋ ಆ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಇರುತ್ತವೆ (ಉದಾಹರಣೆಗೆ ಅಕೌಂಟ್ಸ್ ಹುದ್ದೆಗೆ ಅಕೌಂಟೆನ್ಸಿ). ಇದರ ಜೊತೆಗೆ ಕನ್ನಡ ಭಾಷೆ, ಸಾಮಾನ್ಯ ಇಂಗ್ಲಿಷ್, ಕರೆಂಟ್ ಅಫೇರ್ಸ್ ಮತ್ತು ಮೆಂಟಲ್ ಎಬಿಲಿಟಿ ಬಗ್ಗೆ ಪ್ರಶ್ನೆಗಳು ಬರುತ್ತವೆ.
- ಕನ್ನಡ ಭಾಷಾ ಪರೀಕ್ಷೆ: ಕರ್ನಾಟಕದಲ್ಲಿ ಕೆಲಸ ಮಾಡಬೇಕಾದರೆ ಕನ್ನಡ ಗೊತ್ತಿರಲೇಬೇಕು. ಹಾಗಾಗಿ ಕನ್ನಡ ಭಾಷೆಯ ಮೇಲೆ ಹಿಡಿತ ಇರುವುದು ಬಹಳ ಅವಶ್ಯಕ.
2. ಸಂದರ್ಶನ (Interview)
ಲಿಖಿತ ಪರೀಕ್ಷೆಯಲ್ಲಿ ಯಾರು ಅತಿ ಹೆಚ್ಚು ಅಂಕ ಪಡೆಯುತ್ತಾರೋ, ಅವರನ್ನು 1:5 ಅಥವಾ ಇಲಾಖೆಯ ನಿಯಮದಂತೆ ಇಂಟರ್ವ್ಯೂಗೆ ಕರೆಯಲಾಗುತ್ತದೆ. ಇಲ್ಲಿ ನಿಮ್ಮ ವ್ಯಕ್ತಿತ್ವ ಮತ್ತು ಕೆಲಸದ ಮೇಲಿರುವ ಆಸಕ್ತಿಯನ್ನು ಅವರು ಗಮನಿಸುತ್ತಾರೆ.
ಪರೀಕ್ಷೆಯಲ್ಲಿ ಗೆಲ್ಲಲು ಸಿಂಪಲ್ ಟಿಪ್ಸ್!
- ಹಳೆಯ ಪ್ರಶ್ನೆ ಪತ್ರಿಕೆ ನೋಡಿ: ಕೆಎಂಎಫ್ ನಡೆಸುವ ಹಿಂದಿನ ವರ್ಷಗಳ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಒಮ್ಮೆ ಕಣ್ಣಾಡಿಸಿ. ಇದರಿಂದ ಯಾವ ತರಹದ ಪ್ರಶ್ನೆಗಳು ಬರಬಹುದು ಎಂಬ ಐಡಿಯಾ ಸಿಗುತ್ತೆ.
- ಬೇಸಿಕ್ಸ್ ಮೇಲೆ ಗಮನ ಇರಲಿ: 10ನೇ ತರಗತಿಯವರೆಗಿನ ಸಮಾಜ ವಿಜ್ಞಾನ ಮತ್ತು ವಿಜ್ಞಾನ ವಿಷಯಗಳನ್ನು ಚೆನ್ನಾಗಿ ಓದಿಕೊಳ್ಳಿ.
- ದಿನಪತ್ರಿಕೆ ಓದಿ: ದಿನಾ ಪೇಪರ್ ಓದುವ ಹವ್ಯಾಸ ಬೆಳೆಸಿಕೊಳ್ಳಿ, ಇದರಿಂದ ಪ್ರಚಲಿತ ಘಟನೆಗಳ (Current Affairs) ಬಗ್ಗೆ ಅಪ್‌ಡೇಟ್ ಆಗಿರಬಹುದು.
ಎಲ್ಲಿ ಪರೀಕ್ಷೆ ನಡೆಯಬಹುದು?
ಸಾಮಾನ್ಯವಾಗಿ ಈ ಪರೀಕ್ಷೆಗಳು ಶಿವಮೊಗ್ಗ ಅಥವಾ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇರುತ್ತದೆ. ನಿಮ್ಮ ಹಾಲ್ ಟಿಕೆಟ್ ಬಂದಾಗ ಅದರಲ್ಲೇ ಪರೀಕ್ಷಾ ಕೇಂದ್ರದ ಬಗ್ಗೆ ಪಕ್ಕಾ ಮಾಹಿತಿ ಇರುತ್ತದೆ.
ಕೊನೆಯ ಸಲಹೆ :ಮಿಸ್ ಮಾಡ್ಕೋಬೇಡಿ!
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗದ ಜನರಿಗೆ ಇದು ತಮ್ಮ ಜಿಲ್ಲೆಯಲ್ಲೇ ಅಥವಾ ಹತ್ತಿರದಲ್ಲೇ ಕೆಲಸ ಪಡೆಯಲು ಇರುವ ಅತ್ಯುತ್ತಮ ಅವಕಾಶ.
ನೆನಪಿರಲಿ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-ಫೆಬ್ರವರಿ-2026.
ವೆಬ್‌ಸೈಟ್: www.shimul.coop
ಮುಂದಿನ ಹೆಜ್ಜೆ ಏನು?
ಈಗಾಗಲೇ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆಯಾಗಿದೆ, ಹಾಗಾಗಿ ಇದೊಂದು ಲಕ್ಕಿ ಚಾನ್ಸ್ ಅಂತಲೇ ಭಾವಿಸಿ.
ಸೂಚನೆ!
ನೋಡಿ ಫ್ರೆಂಡ್ಸ್, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 21, 2026. ಆದ್ರೆ ಲಾಸ್ಟ್ ಡೇಟ್ ವರೆಗೂ ವೇಟ್ ಮಾಡ್ಬೇಡಿ. ಯಾಕಂದ್ರೆ ಕೊನೆಯ ದಿನಗಳಲ್ಲಿ ಸರ್ವರ್ ಬಿಜಿ ಆಗಿ ಅಪ್ಲಿಕೇಶನ್ ಸಬ್ಮಿಟ್ ಆಗೋದು ಲೇಟ್ ಆಗಬಹುದು. ಹಾಗಾಗಿ ಇಂದೇ ಟ್ರೈ ಮಾಡಿ.
ಫ್ರೆಂಡ್ಸ್ ಇನ್ನು ಹೆಚ್ಚಿನ ಜಾಬ್ಸ್ ಅಂಡ್ ಸ್ಕೀಮ್ ಬಗ್ಗೆ ಅಪ್ಡೇಟ್ ಮಾಡ್ತಾ ಇರುತೇವಿ ಹಾಗಾಗಿ ನಮ್ಮ್ ಪೇಜ್ Kannada6am ಫಾಲೋ ಮಾಡಕೋಳಿ