RCF Recruitment 2026:ಪದವಿ ಮುಗಿಸಿದವರಿಗೆ ಬಂಪರ್ ಆಫರ್! ಕೇಂದ್ರ ಸರ್ಕಾರದ RCF ನಲ್ಲಿ 188 ಹುದ್ದೆಗಳ ಭರ್ತಿ: ಮಿಸ್ ಮಾಡ್ದೆ ಇಂದೇ ಅಪ್ಲೈ ಮಾಡಿ!

ಹಾಯ್ ಗೆಳೆಯರೇ ನೀವೆನಾದ್ರು ಕೇಂದ್ರ ಸರ್ಕಾರದಲ್ಲಿ ಕೆಲಸವನ್ನು ಹುಡುಕ್ತಾ ಇದೀರಾ ಹಾಗಾದ್ರೆ ಈ ಮಾಹಿತಿ ನಿಮ್ಮಗೊಸ್ಕರ ಕೇಂದ್ರ ಸರ್ಕಾರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಲಿಮಿಟೆಡ್’ (RCFL) ಖಾಲಿ ಇರುವ 188 ಆಪರೇಟರ್ (ಕೆಮಿಕಲ್) ಟ್ರೈನಿ ಹುದ್ದೆಗಳಿಗೆ ನೇಮಕಾತಿಯನ್ನು ಕರೆಯಲಾಗಿದೆ ಇದರ ಬಗ್ಗೆ ಸಂರ್ಪೂಣ ಮಾಹಿತಯನ್ನು ತಿಳಿದುಕೊಳೋಣ ಬನ್ನಿ

  RCF Recruitment 2026:ಹುದ್ದೆಗಳ ವಿವರ

ಸ್ನೇಹಿತರೆ ಈ ಸಲ ಒಟ್ಟು 188 ಹುದ್ದೆಗಳಿಗೆ ತುಂಬಿಕೊಳ್ಳಲಾಗುತ್ತದೆ ಹಾಗೆಯೇ ಇಲ್ಲಿ ನಿಮಗೆ ಜಾತಿ ಪ್ರಕಾರ ಮತ್ತು ಮಿಸಲಾತಿ ಆಧಾರದ ಮೇಲೆ ಹುದ್ದೆಗಳಿಗೆ ಹಂಚಿಕೆಯಾಗುತ್ತವೆ

. ಸಾಮಾನ್ಯ ವರ್ಗದದರಿಗೆ: 85 ಹುದ್ದೆಗಳು ಇರುತ್ತವೆ

. OBC ದವರಿಗೆ: 50 ಹುದ್ದೆಗಳು ಇರುತ್ತವೆ.

. Sc ದವರಿಗೆ: 18 ಹುದ್ದೆಗಳು ಇರುತ್ತವೆ

. ST ದವರಿಗೆ: 17 ಹುದ್ದೆಗಳು ಇರುತ್ತವೆ

. EWS ದವರಿಗೆ: 18 ಹುದ್ದೆಗಳು ಇರುತ್ತವೆ

 RCF Recruitment 2026: ಅರ್ಹತೆಗಳು :

ಗೆಳೆಯರೇ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ನೀವು ಏನನ್ನು ಅರ್ಹತೆಯನ್ನು ಹೊಂದಿರಬೇಕೆಂದು ನೋಡೋಣ ಬನ್ನಿ

  • B.Sc ಕೆಮಿಸ್ಟ್ರಿ: ನೀವು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Sc (Chemistry) ಪದವಿಯನ್ನು ಪಡೆದಿರಬೇಕು ಹಾಗೆಯೇ ಮೂರು ವರ್ಷಗಳ ಕಾಲ ಭೌತಶಾಸ್ತ್ರ ಒಂದು ವಿಷಯವಾಗಿರಬೇಕು ಅದರ ಜೊತೆಗೆ NCVT ಯಿಂದ AO(CP) ಟ್ರೇಡ್ ಮುಗಿಸಿರಬೇಕು.
  • ಡಿಪ್ಲೊಮಾ: ಕೆಮಿಕಲ್ ಇಂಜಿನಿಯರಿಗೆ ಇಲ್ಲವೇ 3 ವರ್ಷ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಮುಗಿಸಿರಬೇಕು
  • ಸ್ಯಾಂಡ್‌ವಿಚ್ ಡಿಪ್ಲೊಮಾ: ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ 4 ವರ್ಷ ಅಥವಾ 3.5 ವರ್ಷದ ಸ್ಯಾಂಡ್‌ವಿಚ್ ಡಿಪ್ಲೊಮಾ ಮಾಡಿರಬೇಕು.

ನೆನಪಿರಲ್ಲಿ ಗೆಳೆಯರೇ ಸಾಮನ್ಯ ಮತ್ತು OBC ಅಭ್ಯರ್ಥಿಗಳಿಗೆ ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು ಹಾಗೇ Sc st ದವರಿಗೆ 50% ಇದ್ದರೆ ಸಾಕು 

RCF Recruitment 2026: ವಯೋಮಿತಿ:

ಅಭ್ಯರ್ಥಿಗಳ ವಯಸ್ಸನ್ನು 1 ಫೆಬ್ರುವರಿ 2026 ಪ್ರಕಾರ ಲೆಕ್ಕ ಹಾಕಲಾಗುವುದು

  1.  ಸಾಮನ್ಯ ವರ್ಗದವರಿಗೆ: ಗರಿಷ್ಠ ಪಕ್ಷ 30 ವರ್ಷಗಳು
  2.  obc ದವರಿಗೆ: ಗರಿಷ್ಠ ವಯಸ್ಸು 33 ವರ್ಷಗಳು
  3.  Sc. St. ದವರಿಗೆ: ಗರಿಷ್ಠ 35 ವರ್ಷಗಳು

ಸಂಬಳದ ವಿವರ :

ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲು ಟ್ರೈನಿಂಗ್ ಇರುತ್ತದೆ ಟ್ರೈನಿಂಗ್ ಮುಗಿದ ಕೂಡಲೇ ಸಿಗುವ ಸಂಬಳದ ಬಗ್ಗೆ ತಿಳಿದುಕೋಳೊಣ ಬನ್ನಿ ಹಾಗಿದ್ರೆ

  • ತರಬೇತಿ ಅವಧಿ (Stipend): ಮೊದಲ ವರ್ಷ ಟ್ರೈನಿಂಗ್ ಕಾಲದಲ್ಲಿ 30,000/- ಸ್ಟೈಫಂಡ್ ಕೊಡಲಾಗುವುದು
  • ಕೆಲಸ ಖಾಯಂ ಆದ ಮೇಲೆ: ಟ್ರೈನಿಂಗ್ ಮುಗಿದ ಮೇಲೆ ಅಭ್ಯರ್ಥಿಗಳಿಗೆ ಗ್ರೇಡ್ A-ನಲ್ಲಿ ಕೆಲಸಕ್ಕೆ ಕೊಡಲಾಗುವುದು ಆಗ ನಿಮ್ಮಗೆ ಸಂಬಳ 34,000 ರೂ ದಿಂದ 1,40,000 ವರೆಗೆ ಶ್ರೇಣಿ ಇರುತ್ತದೆ ಅದರ ಜೊತೆಗೆ ಕೇಂದ್ರ ಸರ್ಕಾರಿಂದ ಇತರೆ ಸಹಾಯಗಳು ಸಿಗುತ್ತವೆ
 RCF Recruitment 2026:ಆಯ್ಕೆ ಪ್ರಕ್ರಿಯೆ ಹೇಗೆ ನಡೆಸಲಾಗುತ್ತದೆ:

ಅರ್ಜಿಯನ್ನು ಹಾಕಿದ ನಂತರ ಅಭ್ಯರ್ಥಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ

  1.  ಆನಲೈನ್ ಪರೀಕ್ಷೆ: ನಿಮಗೆ ಇಲ್ಲಿ ನಿಜವಾದ ವಿಷಯದ ಮೇಲೆ ಆಧಾರಿತ (objective) ಮಾದರಿ ಪರೀಕ್ಷೆ ನಡೆಸಲಾಗುತ್ತದೆ ಇಲ್ಲಿ ನಿಮಗೆ ವಿಷಯಕ್ಕೆ ತಕ್ಕಂತೆ ಪ್ರಶ್ನೆಗಳು ಮತ್ತು ಸಾಮಾನ್ಯ ಜ್ಞಾನದ ಪರೀಕ್ಷೆಗಳು ಇರುತ್ತವೆ
  2. ಟ್ರೆಡ್ ಟೆಸ್ಟ್: ಇಲ್ಲಿ ಪರೀಕ್ಷೆ ಪಾಸಾದ ಮೇಲೆ ಹಾಗೆ ನಿಮ್ಮನ ಪ್ರಯೋಗ ಮಾಡಲು ಟ್ರೆಡ್ ಟೆಸ್ಟ್ ನಡೆಸಲಾಗುತ್ತದಇದು ಕೇವಲ ಅರ್ಹತಾ ಪರೀಕ್ಷೆ ಯಾಗಿರುತ್ತದೆ ಯಾರು ಭಯ ಪಡಬೇಡಿ ಸುಮನ್ನೆ ಚೆಕ್ ಮಾಡುತ್ತಾರೆ

ಅರ್ಜಿ ಶುಲ್ಕ ಎಷ್ಟು ಇರುತ್ತದೆ ?

  1. ಸಾಮಾನ್ಯ, OBC ಮತ್ತು EWS ಅಭ್ಯರ್ಥಿಗಳಿಗೆ: ಇಲ್ಲಿ ನಿಮ್ಮಗೆ ಶುಲ್ಕ 700 ರೂ ಇರುತ್ತದೆ ಇದರ ಜೊತೆಗೆ ಬ್ಯಾಂಕ್ ಚಾರ್ಜಸ್ ಇರುತ್ತದೆ
  2. SC/ST/PH ಮತ್ತು ಮಹಿಳಾ ಅಭ್ಯರ್ಥಿಗಳಿಗೆ: ಇಲ್ಲಿ ನಿಮಗೆ ಯಾವುದೇ ಶುಲ್ಕ ಇರುವುದಿಲ್ಲ ನಿಮಗೆ ಫ್ರೀ ಆಗಿರುತ್ತದೆ.
 RCF Recruitment 2026:ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಯನ್ನು ಹೇಗೆ ಹಾಕುವುದನ್ನು ತಿಳಿದುಕೋಳೊಣ ಬನ್ನಿ

  1. ಅಧಿಕೃತ ಅಧಿಸೂಚನೆ (Notification PDF): ಇಲ್ಲಿ ಕ್ಲಿಕ್ ಮಾಡಿ (ಇದರ ಬಗ್ಗೆ ಸಂಪೂರ್ಣ ವಿವರಗಳಿಗಾಗಿ ಇದನ್ನು ಒಮ್ಮೆ ಓದಿ).
  2. ಆನ್‌ಲೈನ್ ಅರ್ಜಿ ಲಿಂಕ್ (Apply Online): ಇಲ್ಲಿ
  3. ಕ್ಲಿಕ್ ಮಾಡಿ (ವೆಬ್‌ಸೈಟ್‌ನಲ್ಲಿ HR -> Recruitment ಸೆಕ್ಷನ್ ಆಯ್ಕೆ ಮಾಡಿ).
  4. ​ಅಧಿಕೃತ ವೆಬ್‌ಸೈಟ್: www.rcfltd.com

ಹಂತ 1: ಮೊದಲು RCF ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಇರುವ ನೇರ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ 2: ಅಲ್ಲಿ ‘Recruitment’ ಸೆಕ್ಷನ್‌ನಲ್ಲಿ ‘Operator Trainee’ ಲಿಂಕ್ ಆಯ್ಕೆ ಮಾಡಿ.

ಹಂತ 3: ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಬಳಸಿ ‘New Registration’ ಮಾಡಿಕೊಳ್ಳಿ.

ಹಂತ 4: ಲಾಗಿನ್ ಆದ ನಂತರ ನಿಮ್ಮ ವೈಯಕ್ತಿಕ ವಿವರ ಮತ್ತು ಶೈಕ್ಷಣಿಕ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ.

ಹಂತ 5: ಅಗತ್ಯವಿರುವ ದಾಖಲೆಗಳನ್ನು (ಫೋಟೋ, ಸಹಿ, ಅಂಕಪಟ್ಟಿ) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

ಹಂತ 6: ಶುಲ್ಕ ಪಾವತಿಸಿ (ಅನ್ವಯವಾಗುವವರಿಗೆ ಮಾತ್ರ) ಅರ್ಜಿಯನ್ನು ‘Submit’ ಮಾಡಿ.

ಹಂತ 7: ಕೊನೆಯದಾಗಿ ಅರ್ಜಿಯ ಒಂದು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ.

ಸ್ನೇಹಿತರೆ ಇವಾಗಿಂದಲೇ ಅರ್ಜಿಯನ್ನು ಹಾಕಲು ಶುರು ಮಾಡಿ ಇನ್ನು ಟೈಮ್ ಇದೆ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಬೇಡಿ ಯಾಕಂದ್ರೆ ಮುಂದೆ ಸರ್ವರ ಬ್ಯುಸಿ ಬರಬಹುದು

ಪ್ರಮುಖ ದಿನಾಂಕಗಳು:

  • ಅರ್ಜಿಯನ್ನು ಸಲ್ಲಿಸುವ ದಿನಾಂಕಃ ಅರ್ಜಿ ಸಲ್ಲಿಸಲು ಇವಾಗ ಆಗಲೇ ಶುರುವಾಗಿದೆ
  • ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 27 2026 (ಸಾಯಂಕಾಲ 5 ಗಂಟೆ ತನಕ ಮಾತ್ರವಿದೆ)
  • ಯಾರು ಕೊನೆಯ ದಿನಾಂಕದವರೆಗೆ ಕಾಯಬೇಡಿ

ಪರೀಕ್ಷೆ ಕೇಂದ್ರಗಳು ಎಲ್ಲಿವೆ:

ಹೆಚ್ಚಾಗಿ ನಮ್ಮ ರಾಜ್ಯದಲ್ಲಿ ಇರುತ್ತವೆ ಯಾರು ದೂರ ಇದೆ ಅಂತ ಭಯಪಟ್ಟು ಪರೀಕ್ಷೆಗೆ ಹೋಗುವದನ್ನು ನಿಲ್ಲಿಸಬೇಡಿ

ಪರೀಕ್ಷಾ ಕೇಂದ್ರಗಳು 

1 ಬೆಂಗಳೂರು

2 ಮೈಸೂರು

3 ಹುಬ್ಬಳಿ

4 ಧಾರವಾಡ

ಅರ್ಜಿಯನ್ನು ಹಾಕುವಾಗ ನಿಮ್ಮ ಜಿಲ್ಲೆ ಅಥವಾ ನಿಮ್ಮಗೆ ಸಮೀಪವಾಗುವ ಜಿಲ್ಲೆಯನ್ನು ಆಯ್ಕೆ ಮಾಡಿ

 RCF Recruitment 2026:​ಅರ್ಜಿ ಸಲ್ಲಿಸುವಾಗ ಬೇಕಾಗುವ ದಾಖಲೆಗಳು:

1 SSLC ಅಂಕಪಟ್ಟಿ

2 ಡಿಗ್ರಿ ಅಥವಾ ಡಿಪ್ಲೋಮಾ ಸರ್ಟಿಪಿಕೇಟ್

3 ಜಾತಿ ಪ್ರಮಾಣ ಪತ್ರ

4 ಇವಾಗಿನ ಫೋಟೋ

5 ನಿಮ್ಮದೊಂದು ಸಹಿ

ನೀವು ಕೇಳಲಾಗುವ ಪ್ರಶ್ನೆಗಳು:

1 ಅಂತಿಮ ವರ್ಷದ ವಿದ್ಯಾರ್ಥಿಗಳು ಅರ್ಜಿಯನ್ನ ಹಾಕಬಹುದೆ?

ಉ: ಇಲ್ಲ ನೀವು ಅರ್ಜಿಯನ್ನು ಹಾಕುವದರೊಳಗೆ ನಿಮ್ಮ ಪಲಿತಾಂಶ ಬಂದಿರಬೇಕು ಹಾಗೂ ಪೂರ್ಣ ಪ್ರಮಾಣದ ಪದವಿ ಅಥವಾ ಡಿಪ್ಲೋಮಾ ಪಡೆದಿರಬೇಕು

2 ಈ ಕೆಲಸಕ್ಕೆ ಅನುಭವ ಬೇಕಾಗುತ್ತದೆಯೇ?

: ಇಲ್ಲ ಟ್ರೆನಿ ಹುದ್ದೆ ಆಗಿರುವುದರಿಂದ ಅನುಭವ ಇಲ್ಲದವರು ಕೂಡ ಹಾಕಬಹುದು

3 ಪರೀಕ್ಷೆ ಯಾವ ಭಾಷೆಯಲ್ಲಿ ಇರುತ್ತದೆ?

: ಪರೀಕ್ಷೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿರುತ್ತದೆ

ಪರೀಕ್ಷೆಗೆ ತಯಾರಿ ನಡೆಸುವುದು ಹೇಗೆ

1 ​ಸಿಲಬಸ್ ತಿಳಿಯಿರಿ:ನಿಮ್ಮ ಕೆಮಿಕಲ್ ಇಂಜಿನಿಯರಿಂಗ್ ಅಥವಾ ಬಿ.ಎಸ್ಸಿ ಕೆಮಿಸ್ಟ್ರಿ ವಿಷಯಗಳ ಮೇಲೆ ಹೆಚ್ಚಾಗಿ ತಿಳಿದುಕೊಳ್ಳುದು ಒಳ್ಳೆಯದು

2 ​ಜನರಲ್ ಆಪ್ಟಿಟ್ಯೂಡ್: ಗಣಿತ, ರೀಸನಿಂಗ್ ಮತ್ತು ಇಂಗ್ಲಿಷ್ ಗ್ರಾಮರ್ ಬಗ್ಗೆ ದಿನಾಲು ಅಭ್ಯಾಸ ಮಾಡಿ ಹಾಗೂ ಲೆಕ್ಕಗಳ ಮೇಲೆ ಹೆಚ್ಚು ಗಮನ ಕೊಡಿ

3​ಹಳೆಯ ಪ್ರಶ್ನೆ ಪತ್ರಿಕೆ: RCF ನಡೆಸಿದ ಹಿಂದಿನ ವರ್ಷ ಪೇಪರಗಳನ್ನು ನೋಡಿಕೊಳಿ ಅವುಗಳನ್ನು ಬಿಡಿಸಲು ಶುರುಮಾಡಿ

ಗಮನಿಸಿ: ಈ ಮಾಹಿತಿಯು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಉದ್ಯೋಗ ಸುದ್ದಿಗಳಿಗಾಗಿ “ನಮ್ಮ WhatsApp Group ಗೆ Join” ಆಗಿ.

 

 

 

Leave a Comment