History notes 2026:ಇತಿಹಾಸದ ಅರ್ಥ:
ಇತಿಹಾಸವು ಮಾನವನ ಜ್ಞಾನದ ಶ್ರೇಷ್ಠ ಶಾಖೆಗಳಲ್ಲಿ ಒಂದು . ಹಿಸ್ಟರಿ ಎಂಬ ಪದವು ಗ್ರೀಕ್ ಪದವಾದ ಹಿಸ್ಟೋರಿಯಾ ಎಂಬ ಮೂಲದಿಂದ ಬಂದಿದೆ , ವಿಚಾರಣೆ ಅಥವಾ ತನಿಖೆ ಎಂಬ ಅರ್ಥವನ್ನು ಹೊಂದಿರುತ್ತದೆ ಸಂಸ್ಕೃತದಲ್ಲಿ ಇತಿಹಾಸ ಎಂದ್ರೆ ಖಚಿತವಾಗಿ ಘಟಿಸಿದ ಘಟನೆಗಳು ಎಂದರ್ಥ, ಸತ್ಯ ಅನ್ವೇಷಣೆಯೇ ಇತಿಹಾಸದ ಉದ್ದೇಶ, ವಿಶಾಲವಾದ ಅರ್ಥದಲ್ಲಿ ಇತಿಹಾಸವು ಮಾನವನ ಜೀವನದ ಎಲ್ಲಾ ಆಯಾಮಗಳನ್ನು ಕುರಿತು ಅಧ್ಯಯನ ಮಾಡಲಾಗುತ್ತದೆ .
ಇತಿಹಾಸವನ್ನು ವೈಜ್ಞಾನಿಕವಾಗಿ ಬರೆಯುವ ಕಲೆಯನ್ನು ಮೊಟ್ಟ ಮೊದಲಿಗೆ ಗ್ರೀಕರು ವಿಕಸನಗೊಳಿಸಿದರು. ಇತಿಹಾಸವನ್ನು ಬರೆಯಲು ಆರಂಭಿಸಿದವರಲ್ಲಿ ಗ್ರೀಕ್ ಇತಿಹಾಸಕಾರ ಹೆರೊಡೋಟಸ್ ಮೊದಲ್ನೇಯವನು ಈತನನ್ನು ಇತಿಹಾಸದ ಪಿತಾಮಹ ಎಂದು ಕರೆಯಲಾಗಿದೆ.
History notes 2026:ಇತಿಹಾಸಕರರ ವ್ಯಾಖ್ಯೆಗಳು:
ಸಾಮಾನ್ಯವಾಗಿ ಇತಿಹಾಸ ಎಂದರೆ ಗತಕಾಲದ ಘಟನೆಗಳ ದಾಖಲೆ ಎಂದು ತಿಳಿಸಲಾಗಿದೆ.. ಸಾರ್ವತ್ರಿಕವಾಗಿ ಒಪ್ಪಿತವಾದ ಇತಿಹಾಸದ ವ್ಯಾಖ್ಯೆ ಇಲ್ಲ. ಇದನ್ನು ಬೇರೆ ಬೇರೆ ವಿದ್ವಾಂಸರು ತಮದೇ ಅದ ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಹೆರೊಡೋಟಸ್ನಿಂದ ಅಮೇರಿಕಾದ ಇತಿಹಾಸಕಾರ ವಿಲ್ ಡುರಂಟ್ ರವರೆಗೆ ಹಲವರು ಇತಿಹಾಸಕಾರರು ಇತಿಹಾಸವನ್ನು ತಮದೇ ವಿವಿಧ ದೃಷ್ಟಿ ಕೋನಗಳಲ್ಲಿ ವ್ಯಾಖ್ಯಾನಿಸಿದ್ದಾರೆ.
1. ಹೆರೊಡೋಟಸ್ (ಸಾಲಿವನ್ .ಶಕೆ ಪೂ 484-424)
ಹೆರೊಡೋಟಸ್ ಸಾಲಿವಾನ ಶಕೆ ಪೂರ್ವ 5ನೇ ಶತಮಾನದಲ್ಲಿ ಜೀವಿಸಿದ್ದ ಗ್ರೀಕ್ ಇತಿಹಾಸಕಾರರಲ್ಲಿ ಒಬ್ಬರಾಗಿದ್ದಾರೆ . ಇವರು ಇತಿಹಾಸಕೆ ಮತ್ತು ಮಾನವಶಾಸ್ತ್ರಕ್ಕೆ ಗಣನೀಯವಾದ ತಮ್ಮ ಕೊಡುಗೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತದೆ . ಗ್ರೀಸ್ ಮತ್ತು ಪಶ್ಚಿಮ ಏಷ್ಯಾದಲ್ಲಿ ವ್ಯಾಪಕ ಸಂಚಾರ ಮಾಡಿದನು ಹೆರೊಡೋಟಸ್ ಗ್ರೀಕ್ ನಗರ- ಮತ್ತು ರಾಜ್ಯಗಳ ಬಗ್ಗೆ ಅನೇಕ ಸಂಗತಿಗಳನ್ನು ಸಂಗ್ರಹಿಸಿ ಅವುಗಳನ್ನು ಒಂಬತ್ತು ಪುಟಗಳಲ್ಲಿ ಬರೆದಿದ್ದಾನೆ. ಎಂದು ಇತಿಹಾಸದಲ್ಲಿ ಹೇಳಲಾಗುತ್ತದೆ ಅವನು ಬರೆದಿರುವ ಪುಟಗಳಲ್ಲಿ ‘ದಿ ಹಿಸ್ಟ್ರಿ ಆಫ್ ಪರ್ಷಿಯನ್ ವಾರ್ಸ್'(ಪರ್ಷಿಯನ್ ಕದನಗಳ ಇತಿಹಾಸ) ಇದು ಅವನ ಪ್ರಮುಖ ಪುಟವಾಗಿದೆ ಈ ಪುಟದಲ್ಲಿ ಗ್ರೀಕರು ಮತ್ತು ಪರ್ಷಿಯನ್ನರ ನಡುವೆ ನಡೆದ ಕದನಗಳ ಬಗ್ಗೆ ಕುರಿತದ್ದಾಗಿದೆ. ಇದು ಇತಿಹಾಸದ ಆರಂಭಿಕ ಕೃತಿಯಾಗಿದೆ. ಎಂದು ಹೇಳಲಾಗುತ್ತದೆ ಹೆರೊಡೋಟಸ್ ಮೊದಲ ಬಾರಿಗೆ ಇತಿಹಾಸದ ಅರ್ಥ ಮತ್ತು ವ್ಯಾಪ್ತಿಯನ್ನು ಮೊದಲು ತಿಳಿಸಿದವನು.
ಹೆರೊಡೋಟಸ್ ಅವರ ಪ್ರಕಾರ:- “ಮುಂದಿನ ಪೀಳಿಗೆಯು ಅಥವಾ ಮುಂದಿನ ದಿನಮಾನಗಳಲ್ಲಿ ನಾವು ನೆನಪಿಡಬೇಕಾದ ಮಹಾನ್ ವೀರರ ಅಥವಾ ಮಹತ್ವಪೂರ್ಣವಾದ ಘಟನೆಗಳ ದಾಖಲೆಯೇ ಇತಿಹಾಸ ವಾಗಿದೆ “, ಈ ವ್ಯಾಖ್ಯೆಯಲ್ಲಿ ಹೆರೊಡೋಟಸ್ನು ಭವಿಷ್ಯದ ತಲೆಮಾರುಗಳು ಮಹಾನ್ ವ್ಯಕ್ತಿಗಳ ಸಾಧನೆ ಹಾಗೂ ಮಹತ್ವಪೂರ್ಣ ಘಟನೆಗಳಿಂದ ನಾವು ಕಲಿಯಬಹುದಾದ ಪಾಠಗಳ ಮೇಲೆ ತನ್ನ ವಿಚಾರಗಳನ್ನು ಕೇಂದ್ರೀಕರಿಸಿದ್ದಾನೆ. ಎಂದು ಹೇಳಲಾಗುತ್ತದೆ
ಸಂತ ಅಗಸ್ಟೀನ್ (ಸಾ ಶ . 354-430)
ಸಂತ ಆಗಸ್ಟೈನ್ ಈತನೊಬ್ಬ ಶ್ರೇಷ್ಠ ಕ್ರಿಶ್ಚಿಯನ್ ಸಂತ ಹಾಗೂ ಚಿಂತಕ ಆಗಿದ್ದನು . ಇವನು ಮಧ್ಯಕಾಲೀನ ಯುಗದಲೀನ ಚರ್ಚಿನ ಶ್ರೇಷ್ಠ ಇತಿಹಾಸಕಾರ. ಈತನು ಬರೆದಿರುವ ಕೃತಿಯಾದ ‘ದ ಸಿಟಿ ಆಫ್ ಗಾಡ್’ (The City of God) ಕೃತಿಯು ಪ್ರಪಂಚದ ಪ್ರಸಿದ್ಧ ಕೃತಿಗಳಲ್ಲಿ ಇದು ಒಂದಾಗಿದೆ ಎಂದು ಹೇಳಲಾಗುತ್ತದೆ ಸಂತ್ ಆಗಸ್ಟ್ನನ ಪ್ರಕಾರ:- “ಇತಿಹಾಸವು ದೇವರು ಮತ್ತು ಸೈತಾನನ ನಡುವಿನ ಸಂಘರ್ಷದ ವಿಭಿನ್ನ ಕಥೆಯಾಗಿದ್ದು, ಅಂತಿಮ ದಲ್ಲಿ ದೇವರು (ಶಿಷ್ಟ) ಸೈತಾನನ (ದುಷ್ಟ) ಮೇಲೆ ಸಾಧಿಸುವ ವಿಜಯದಲ್ಲಿ ಪರ್ಯಾವಸನಗೊಳಿಸಿದರು .
ಸಂತ ಆಗಸ್ಟೈನ್ ಈತನೊಬ್ಬ ಚರ್ಚಿನ ಇತಿಹಾಸಕಾರನಾಗಿದ್ದು ಈತ ತನ್ನ ಬರವಣಿಗೆಯಲ್ಲಿ ಪವಾಡಗಳು ಮತ್ತು ಸಂತರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾನೆ. ಇವನು ಪ್ರಕಾರ ಮಾನವನ ಇತಿಹಾಸವು ದೇವರಿಂದ ಮಾರ್ಗದರ್ಶಿಸಲ್ಪಡುತ್ತದೆ ಎಂದು ಬಲವಾಗಿ ನಂಬಿಕೆಯನ್ನು ಇಟ್ಟಿದ್ದನು . ಮಧ್ಯಕಾಲೀನ ಯೂರೋಪಿನ ಇತಿಹಾಸನವು ಅನೇಕ ಶತಮಾನಗಳವರೆಗೆ ಪಾದ್ರಿಗಳ ಏಕಸ್ವಾಮ್ಯ ದಲ್ಲಿ ಇಡಲಾಗಿತ್ತು ಈತನು ಜಾತ್ಯಾತೀತ ಮತ್ತು ಧಾರ್ಮಿಕ ಇವೆರಡೂ ಪ್ರಮುಖ ಇತಿಹಾಸವನ್ನು ಒಂದು ಸಾಧನವಾಗಿ ಚರ್ಚಿನ ನಂಬಿಕೆಯನ್ನು ಜನಪ್ರಿಯಗೊಳಿಸಲು ಬಳಸಿದರು ಎಂದು ಹೇಳಲಾಗುತ್ತದೆ .
3.ಕಾರ್ಲ್ ಮಾರ್ಕ್ಸ್(1818-1883)
ಕಾರ್ಲ್ ಮಾರ್ಕ್ಸ್ ಈತನೊಬ್ಬ ಜರ್ಮನ್ ಪ್ರಮುಖ ತತ್ವಜ್ಞಾನಿ, ಅರ್ಥಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ, ಇತಿಹಾಸಕಾರ ನಾಗಿದ್ದನು , ಪತ್ರಕರ್ತ ಅಲ್ಲದೆ ಮತ್ತು ಕ್ರಾಂತಿಕಾರಿ ಸಮಾಜವಾದಿ ಆಗಿದ್ದನು . ಸಮಾಜದ ವಿಜ್ಞಾನಗಳು ಮತ್ತು ಸಮಾಜವಾದಿ ಚಳುವಳಿಗಳ ಬೆಳವಣಿಗೆಯಲ್ಲಿ ಈತನ ಚಿಂತನೆಗಳು ಪ್ರಮುಖ ಪಾತ್ರವಹಿಸಿದವು . ಇವನನ್ನು ಇತಿಹಾಸದಲ್ಲಿ ಪ್ರಖ್ಯಾತ ಅರ್ಥಶಾಸ್ತ್ರಜ್ಞನೆಂದು ಪರಿಗಣಿಸಲಾಗುತ್ತದೆ . ಇವನು ಮೊದಲ ಬಾರಿಗೆ ಇತಿಹಾಸವನ್ನು ಹೊಸ ಆರ್ಥಿಕ ದೃಷ್ಟಿಕೋನದಿಂದ ಅರ್ಥೈಸಿ ವ್ಯಾಖ್ಯಾನಿಸಿದನು. ಕಾರ್ಲ್ಮಾರ್ಕ್ಸ್ ಅವರ ಪ್ರಕಾರ “ಇತಿಹಾಸ ಅಂದರೆ ಉಳ್ಳವರು ಹಾಗೂ ಇಲ್ಲದವರ ನಡುವಿನ ಒಂದು ಸಂಘರ್ಷ”, ಎಂದು ಹೇಳಲಾಗುತ್ತದೆ ಈ ವ್ಯಾಖ್ಯೆಯಲ್ಲಿ ಮಾರ್ಕ್ಸ್ನು ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷಕ್ಕೆ ಒಂದು ಪ್ರಮುಖ ಒತ್ತು ನೀಡಿದ್ದಾನೆ.
ಉಳ್ಳವರು ಮತ್ತು ಇಲ್ಲದವರು ಎಂದರೆ (ಬಡವರು ಮತ್ತು ಶ್ರೀಮಂತರ) ನಡುವಿನ ಹೋರಾಟ ಎನ್ನಲಾಗುತ್ತದೆ ಇಲ್ಲಿ ಶೋಷಕರು ಮತ್ತು ಶೋಷಿಸಲ್ಪಡುವವರ ನಡುವೆ ನಿರಂತರ ಸಂಘರ್ಷ ನಡೆಯುತ್ತದೆ ಎಂದು ಮಾರ್ಕ್ಸ್ನು ವಾದ ಮಾಡುತ್ತಾನೆ . ಕಾಲ್ ಮಾರ್ಕ್ಸ್ ಅನ್ನು ‘ದಾಸ್ ಕ್ಯಾಪಿಟಲ್’ ಮತ್ತು ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೋ’ ಎಂಬ ಎರಡು ಪ್ರಮುಖ ಶ್ರೇಷ್ಠವಾದ ಕೃತಿಗಳನ್ನು ಬರೆದಿದ್ದಾನೆ
4. .ಜೆ.ಬಿ. ಬ್ಯೂರಿ. (1861-1927)
ಜೆ.ಬಿ. ಬ್ಯೂರಿ ಒಬ್ಬ ಐರಿಷ್ ಇತಿಹಾಸಕಾರ ಮತ್ತು ವಿದ್ವಾಂಸ, ಆಗಿದ್ದನು ಈತನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಆಧುನಿಕ ಇತಿಹಾಸದ ಪ್ರಾಧ್ಯಾಪಕನಾಗಿ ಸೇವೆಯನ್ನು ಸಲ್ಲಿಸಿದ್ದನ್ನು
ಇವನ ಪ್ರಕಾರ ‘ಇತಿಹಾಸವು ಒಂದು ವಿಜ್ಞಾನ; ಇಲ್ಲಿ ಇತಿಹಾಸವು ಹೆಚ್ಚು ಅಲ್ಲ. ಕಡಿಮೆಯೂ ಅಲ್ಲ’, ಬ್ಯೂರಿಯು ಪ್ರತಿಯೊಬ್ಬ ಇತಿಹಾಸಕಾರರು ಒಬ್ಬ ವಿಜ್ಞಾನಿಯ ಹಾಗೆ ಕಾರ್ಯನಿರ್ವಹಿಸಬೇಕೆಂದು. ನಿರ್ದಿಷ್ಟ ದಾಖಲೆಗಳು ಹೊರಡಿಸಿದರು
ಈತನು ಅಂಕಿ-ಅಂಶಗಳನ್ನು ಸಂಗ್ರಹಿಸಬೇಕೆಂದು ಹೇಳಿದ್ದಾನೆ. ಈತನು ವಿಷಯವನ್ನು ವಿಮರ್ಶಾ್ರತ್ಮಕವಾಗಿ ಅವುಗಳ ಬಗ್ಗೆ ಮೌಲ್ಯಮಾಪನ ಮಾಡಿ ಯಾವುದೇ ಪೂರ್ವಾಗ್ರಹವಿಲ್ಲದೆ ಸತ್ಯವನ್ನು ಹೊರತರಬೇಕೆಂದು ಹೇಳಿದ್ದಾನೆ. ಆದರೆ. ಇತಿಹಾಸದಲ್ಲಿ ಅವಲೋಕನ ಮತ್ತು ಪ್ರಯೋಗ ಇತಿಹಾಸದಲ್ಲಿ ಸಾಧ್ಯವಿಲ್ಲ ಎಂದು ತಿಳಿಯಲಾಯಿತು . ಅಂತೆಯೇ ಇತಿಹಾಸದ ಘಟನೆಗಳನ್ನು ಪುನರ್ ನಿರ್ಮಾಣಮಾಡಲು ಸಾಧ್ಯವಿಲ್ಲ. ಅದ್ದರಿಂದ ಇತಿಹಾಸ ಪರಿಶುದ್ಧ ವಿಜ್ಞಾನವಲ್ಲ, ಜೆ.ಬಿ.ಬ್ಯೂರಿಯವರೇ ಹೇಳುವಂತೆ “ಇತಿಹಾಸವು ಒಂದು ಪ್ರಾಚೀನ ಕಲೆ ಮತ್ತು ವಿಜ್ಞಾನವಾಗಲು ಹೊರಟಿರುವ ಇತ್ತೀಚಿನ ಆಕಾಂಕ್ಷಿ”. ಎಂದು ಹೇಳಲಾಗುತ್ತದೆ ಇತಿಹಾಸಕಾರ ವಿಷಯವನ್ನು ಪ್ರಸ್ತುತಪಡಿಸುವಲ್ಲಿ ತನ್ನ ಪ್ರತಿಭೆಯನ್ನು ಕ್ರಿಯಾತ್ಮಕವಾಗಿ ರೀತಿಯಲ್ಲಿ ಬಳಸಿಕೊಳ್ಳಬೇಕು. ಹೇಳಿದ್ದಾನೆ
ಆರ್ನಾಲ್ಡ್ ಟಾಯ್ಬಿ (1889-1975)
ಆರ್ನಾಲ್ಡ್ ಟಾಯ್ಬಿ ಈತನೊಬ್ಬ ಬ್ರಿಟೀಷ್ ಇತಿಹಾಸಕಾರ ರಲ್ಲಿ ಒಬ್ಬನಾಗಿದ್ದ . ಇವನು ಇತಿಹಾಸದ ಪ್ರಾಧ್ಯಾಪಕನಾಗಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿದನು . ಧರ್ಮ ಮತ್ತು ಇತಿಹಾಸದ ಬಗ್ಗೆ ಇದರ ಕುರಿತಾದ ಅನೇಕ ಕೃತಿಗಳನ್ನು ಇವನು ಬರೆದಿದ್ದಾದನು ಇವನ ಬರೆದಿರುವ ಪ್ರಸಿದ್ಧ ಕೃತಿಗಳಲ್ಲಿ ‘ಎ ಸ್ಟಡಿ ಆಫ್ ಹಿಸ್ಟರಿ’ ಇದು ಒಂದಾಗಿದೆ ಇದರಲ್ಲಿ ಹನ್ನೆರಡು ಸಂಪುಟಗಳಲ್ಲಿವೇ . ಈತನು ಜಗತ್ತಿನಲಿ 26 ನಾಗರಿಕತೆಗಳನ್ನು ಅಧ್ಯಯನ ಮಾಡಿದ್ದಾನೆ. ಅಂದು ಹೇಳಲಾಗುತ್ತದೆ ಈತನ ಪ್ರಕಾರ – “ಇತಿಹಾಸವು ಒಂದು ನಾಗರಿಕತೆಗಳ ಏಳು ಬೀಳಿನ ಕಥೆ ಯಾಗಿದೆ”. ಟಾಯ್ಸ್ ಬಿ ವಿವರಿಸಿದಂತೆ- ಇತಿಹಾಸವು ಒಂದು ಮಾನವನ ಅಧ್ಯಯನವಾಗಿದೆ. ಆದರೆ ಇದು ವ್ಯಕ್ತಿಗಳ, ಮತ್ತು ಅಧಿಕಾರ, ವೈಭವ ಹಾಗೂ ಯುದ್ಧಗಳ ಕಥೆಯಲ್ಲ, ಇತಿಹಾಸದಲ್ಲಿ ‘ಮಾನವನಿಗೆ’ ಮಹತ್ವಕೊಡಬೇಕು. ಹೇಳಿದನು ಇತಿಹಾಸವು ಜ್ಞಾನದ ಭಂಡಾರ ಹಾಗೂ ಸಂಸ್ಕೃತಿ ಮತ್ತು ನಾಗರಿಕತೆಗಳ ಬೆಳವಣಿಗೆಯಲ್ಲಿ ಈತನ ಪಾತ್ರವು ಮಹತ್ವದ್ದಾಗಿದೆ ಎಂದು ಟಾಯ್ಸ್ಬಿ ವಿವರಿಸಿದನು .
6. ಜವಾಹರ ಲಾಲ್ ನೇಹರು (1889-1964)
ನೆಹರು ಅವರು ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿದ್ದ ನೆಹರು ಅವರು ಇತಿಹಾಸದ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದರು. ನೆಹರು ಅವರು ಬರೆದಿರುವ ಕೃತಿಯಾದ ‘ಡಿಸ್ಕವರಿ ಆಫ್ ಇಂಡಿಯಾ’ ಮತ್ತು ‘ದಿ ಗ್ಲಿಂಪ್ಸ್ಸ್ ಆಫ್ ವರ್ಲ್ಡ್ ಹಿಸ್ಟರಿ’ ಅವರ ಪ್ರಸಿದ್ಧ ಕೃತಿಗಳು ಪ್ರಮುಖವಾಗಿವೆ . ಅದಲ್ಲದೆ ನೆಹರು ಅವರು ರಾಜಕೀಯ ಬಂಧಿಯಾಗಿದ್ದಾಗ ಈ ಎರಡೂ ಕೃತಿಗಳನ್ನು ಬರೆದಿದ್ದಾರೆ. ‘ದಿ ಗ್ಲಿಂಪ್ಸ್ಸ್ ಆಫ್ ವರ್ಲ್ಡ್ ಹಿಸ್ಟರಿ’ಯು ನೆಹರುರವರು ತಮ್ಮ ಮಗಳಾದ ಇಂದಿರಾಗಾಂಧಿಯವರಿಗೆ ಪತ್ರ ಬರೆಯುವಾಗ ಈ ಕೃತಿಗಳ ಸಂಗ್ರಹವಾಗಿದೆ . ನೆಹರು ಅವರ ಪ್ರಕಾರ”ಆನಾಗರಿಕತೆಯಿಂದ ನಾಗರಿಕತೆಯಡೆಗೆ ಸಾಗಿದ ಮಾನವನ ಕಥೆಯೇ ಇತಿಹಾಸ” ವಾಗಿದೆ ಎಂದು ಹೇಳಲಾಗುತ್ತದೆ . ಯುಗ ಯುಗಗಳಲ್ಲಿ ಮಾನವನು ಪ್ರತಿ ವಿಷಯದಲ್ಲೂ ಅಥವಾ ಹಂತದಲ್ಲೂ ಪ್ರಗತಿ ಹೊಂದಲು ಸಂಘರ್ಷ ಮಾಡಿದ್ದಾನೆ ಎಂದು ನೆಹರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಮಾನವನು ನಾಗರಿಕತೆಯ ಉನ್ನತ ಮಟ್ಟವನ್ನು ತಲುಪಲು ಸಂಘರ್ಷ ಹಾಗೂ ಸಾಮರಸ್ಯಗಳೆರಡು ಸಹಾಯ ಮಾಡಿವೆ ಎಂದಿದ್ದಾರೆ. ನೆಹರು ಅವರು ಈ ಅಂಶವನ್ನು 4000 ವರ್ಷಗಳಿಗೂ ಹೆಚ್ಚಿನ ಮಾನವನ ಇತಿಹಾಸದ ಹಿನ್ನಲೆಯಲ್ಲಿ ಖಚಿತ ಪಡಿಸಿಕೊಳ್ಳಲಾಗಿದೆ. ಎಂದು ಹೇಳಲಾಗಿದೆ
ಸ್ನೇಹಿತರೆ ಈ ಮೇಲಿನ ಎಲ್ಲ ವ್ಯಾಖ್ಯೆಗಳಿಂದ ಇತಿಹಾಸವು ಪ್ರಮುಖವಾಗಿ ಮಾನವನ ಚಟುವಟಿಕೆಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಸ್ಪಷ್ಟವಾಗುತ್ತದೆ. ಇದು ಪ್ರಾಚೀನ ಘಟನೆಗಳಿಂದ ವಿವರವಾಗಿದೆ ಮತ್ತು ಮಾನವನನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಿದ್ದಾನೆ . ಅಂತಿಮವಾಗಿ ಹೇಳವುದಾದರೆ-ಇತಿಹಾಸವು ಮಾನವನ ಎಲ್ಲಾ ಮಹತ್ವಪೂರ್ಣ ಚಟುವಟಿಕೆಗಳನು , ವಿವಿಧ ಆಯಾಮಗಳ ಮೂಲಕ ಅಧ್ಯಯನವಾಗಿದ್ದು ಇದು ‘ಕಾಲ’ ಮತ್ತು ‘ಸ್ಥಳ’ಗಳಿಂದ ಪ್ರತಿಬಂಧಿತವಾಗಿದೆ. ಎಲ್ಲಾಗಿದೆ
History notes 2026:ಇತಿಹಾಸ ಅಧ್ಯಯನದ ಮಹತ್ವ ಕುರಿತು
ಅನಾದಿಕಾಲದಿಂದ ಇಂದಿನ ಕಾಲದವರೆಗಿನ ಈ ಮಾನವ ಜನಾಂಗದ ಸಂಸ್ಕೃತಿಯ ಬೆಳವಣಿಗೆಯ ಮೇಲೆ ವಿವರಣೆಗಳನ್ನು ಇತಿಹಾಸದ ಅಧ್ಯಯನವು ನೀಡಲಾಗಿದೆ . ಈ ಇತಿಹಾಸವು ವಿವಿಧ ಜನರ ಅನುಭವಗಳನ್ನು ಸಾಗರವನಗಿ ಪ್ರಸ್ತುತಪಡಿಸುತ್ತದೆ. ಇದರಿಂದಾಗಿ ಇತಿಹಾಸದ ಅಧ್ಯಯನವು ಮಾನವನನಿಗೆ ವಿವಿಧ ಬಗೆಯ ರೀತಿಯಲ್ಲಿ ಉಪಯೋಗಕಾರಿಯಾಗಿದೆ.
1. ಇತಿಹಾಸವು ಗತಕಾಲದ ಘಟನೆಗಳ ಸ್ಮರಣೆಯಾಗಿದೆ:
ಇತಿಹಾಸದ ಅಧ್ಯಯನದಲಿ ನಮಗೆ ವಿಶ್ವದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಮತ್ತು ಪ್ರಮುಖ ಘಟನಾವಳಿಗಳನ್ನು ಕುರಿತು ತಿಳಿಸುತ್ತದೆ. ಅಲ್ಲದೆ ಇದು ಮಾನವರ ಹೋರಾಟ, ಆತನು ಪರಿಸರಕ್ಕೆ ಹೊಂದಿಕೊಂಡ ಹೋಗುತ್ತಿರುವ ರೀತಿಯನು ಹಾಗೂ ಅವನ ಏಳಿಗೆಗಾಗಿ ಮತ್ತು ವೈಫಲ್ಯಗಳ ಬಗೆಗೆ ಒಳನೋಟವನ್ನೊದಗಿಸುತ್ತದೆ. “ಒಂದು ದೇಶದ ಗತಕಾಲವು ಒಬ್ಬ ವ್ಯಕ್ತಿಯ ಸ್ಥಿತಿಯಿದ್ದಂತೆ ಸ್ಥತಿ ಹೋದರೆ ಅದರೊಂದಿಗೆ ಚಿತ್ತಸ್ವಾಸ್ಥ್ಯವೂ ಹೋಗುತ್ತದೆ” ಎಂದು ವಿಲ್ಡುರೆಂಟ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಇದರಿಂದಾಗಿ ಮಾನವನ ಬುದ್ಧಿಶಕ್ತಿ ಹಾಗೂ ಜ್ಞಾನದ ಬೆಳವಣಿಗೆಗೆ ಅವನು ತನ್ನ ಪರಿಸರವನೇ ಮತ್ತು ಇಡೀ ಜಗತ್ತನೇ ಅರ್ಥ ಮಾಡಿಕೊಳ್ಳವುದು ತುಂಬಾ ಅವಶ್ಯವಾಗಿದೆ. ಎಂದು ಹೇಳಲಾಗುತ್ತದೆ ಆ “ವ್ಯಕ್ತಿಗೆ ನೆನಪು ಇರುವಂತೆ ಮನುಕುಲಕ್ಕೆ ಇತಿಹಾಸ”, ಎಂದು ಹೇಸ್ ಮತ್ತು ಮೂನ್ ಬರೆದರು
2. ಇತಿಹಾಸವು ಧಾರ್ಮಿಕ ಸಹಿಷ್ಣುತೆಯನ್ನು ಬೋಧಿಸುತ್ತದೆ:
ಸಮಾಜದಲ್ಲಿಯ ಶಾಂತಿ ಹಾಗೂ ಸೌಹಾರ್ದತೆಗೆ ಅನೇಕ ಪಂಥಗಳ ನಡುವೆ ಧಾರ್ಮಿಕ ಸಹಿಷ್ಣುತೆ ಅತ್ಯ ಅವಶ್ಯಕವಾಗಿದೆ. ಎಂದು ಹೇಳಬಹುದು ಆದರೆ ಶಾಂತಿ ಸಮಾಜದಲ್ಲಿನ ಒಳನೋಟದ ಸಮೃದ್ಧಿಗೆ ಕಾರಣವಾಗುತ್ತದೆ. ಆದರೆ ಧಾರ್ಮಿಕ ಅಸಹಿಷ್ಣುತೆಯಿಂದ ಸಮಾಜದಲ್ಲಿ ಯಾವುದೇ ಪ್ರಗತಿ ಸಾಧ್ಯವಿಲ್ಲವೆಂದು ಇತಿಹಾಸಕಾರರು ಎಚ್ಚರಿಸಿದ್ದರು . ಇತಿಹಾಸದಲ್ಲಿ ಧಾರ್ಮಿಕ ದಿಗ್ಗಜರಾದ-ಏಸುಕ್ರಿಸ್ತ, ಮತ್ತು ಕಬೀರ್, ಗುರುನಾನಕ್ ಸೂಫಿಸಂತರು, ಬಸವೇಶ್ವರ ಮತ್ತು ರಾಮಕೃಷ್ಣ ಪರಮಹಂಸರು ಕೆಲವರು ಮಾನವನ ಅಂತರಾಳದಲ್ಲಿ ಮೂಡಿದ ಪ್ರೀತಿ ವಾತ್ಸಲ್ಯದ ಬೀಜವನ್ನು ಬಿತ್ತಲು ಪ್ರಯತ್ನಿಸಿದರು. ಈ ಮೂಲಕ ನಮ್ಮ ಸಮಾಜದಲ್ಲಿ ಧಾರ್ಮಿಕ ಸಾಮರಸ್ಯವನ್ನು ಪ್ರಚಾರಮಾಡಿದರು. ಆದ್ದರಿಂದ ಧಾರ್ಮಿಕ ಸಹಿಷ್ಣುತೆಯ ಬೆಳವಣಿಗೆಗೆ ಇತಿಹಾಸದ ಜ್ಞಾನ ತುಂಬಾ ಅಗತ್ಯವಾಗಿದೆ . ಆರ್ನಾಲ್ಡ್ ಟಾಯ್ಸಬಿ ಇವರ ಮಾತಿನಲ್ಲಿ ಹೇಳುವುದಾದರೆ ‘ಭಾರತದ ಧರ್ಮ ಸಹಿಷ್ಣುತೆ ಮಾನವ ಜನಾಂಗದ ಉಳಿವಿಗೆ ಏಕೈಕ ಮಾರ್ಗವಾಗಿದೆ’. ಎಂದು ಹೇಳುತ್ತದೆ
3. ಇತಿಹಾಸವು ಸ್ಫೂರ್ತಿಯ ಮೂಲವಾಗಿದೆ:
ಈ ಇತಿಹಾಸವು ಮಾನವನ ಮೂಲ ಅನುಭವಗಳ ಸಾಗರ ಇದ್ದಂತೆ. ಆದರೆ ಇತಿಹಾಸವು ಮಹಾನ್ ವ್ಯಕ್ತಿಗಳ ಸುಖ-ದುಃಖ, ಶ್ರೇಷ್ಠಕಾರ್ಯಗಳು, ಸಾಧನೆಗಳು, ಸಾಹಸಗಳು, ಕೊಡುಗೆಗಳು. ಚಿಂತನೆಗಳು ಮತ್ತು ತ್ಯಾಗಗಳ ದಾಖಲೆಯಾಗಿದೆ. ಅದರಿಂದಾಗಿ ಇದು ಒಂದು ಸ್ಫೂರ್ತಿಯ ಸೆಲೆಯಾಗಿದೆ. ಉಳಿದಿದೆ ಉದಾಹರಣೆಗೆ- ಪರಂಪರೆ ಮತ್ತು ಸಂಸ್ಕೃತಿ, ಮಹಾ ಪುರುಷರಾದ ಮಹಾವೀರ, ಬುದ್ಧ, ಆಚಾರ್ಯರುಗಳಾದ ಶಂಕರ, ರಾಮಾನುಜ ಮತ್ತು ಮಧ್ವಾಚಾರ್ಯ, ವಿವೇಕಾನಂದ, ಅಬ್ರಹಾಂ ಲಿಂಕನ್ ಮತ್ತು ನೆಲ್ಸನ್ ಮಂಡೇಲರ ಆದರ್ಶಗಳು ಸ್ಫೂರ್ತಿಯ ಮೂಲವಾಗಿವೆ. ಅವರ ಬೋಧನೆಗಳು ಮತ್ತು ಉಪದೇಶಗಳು ಜನರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅವರ ಆದರ್ಶಗಳು ಪ್ರಮುಖವಾದ ಪಾತ್ರವಹಿಸಿದೆ. “ಆ ಮಹಾಪುರುಷರು ಇವತ್ತು ಇಲ್ಲದೆ ಇರಬಹುದು , ಆದರೆ ಪ್ರಪಂಚದ ಇತಿಹಾಸ ಮತ್ತು ಮಹಾನ್ ಪುರುಷರ ಆತ್ಮಚರಿತ್ರೆಗಳು ಇನ್ನೂ ಕೂಡ ಜನರ ಮನಸ್ಸಿನಲ್ಲಿ ಜೀವಂತವಾಗಿ ಉಳಿದಿವೆ”. ಎಂದು ಥಾಮಸ್ ಕಾರ್ಲೈಲ್ ಹೇಳಿದ್ದಾನೆ.ಇತಿಹಾಸವು ಜನರ ಮನಸ್ಸಿನಲ್ಲಿ ದೇಶಾಭಿಮಾನವನ್ನು ಮೂಡಿಸುತ್ತದೆ:
ಜನರ ಮನಸ್ಸಿನಲ್ಲಿ ದೇಶಾಭಿಮಾನವನ್ನು ಮೂಡಿಸುವಲ್ಲಿ ಇತಿಹಾಸದ ಅಧ್ಯಯನವು ಒಂದು ಪ್ರಮುಖವಾದ ಅಂಶವಾಗಿದೆ. ಎಂದು ಹೇಳ ಬಹುದು ಆದರೆ ಒಂದು ದೇಶದ ಸಂಸ್ಕೃತಿ ಕಲೆ, ಸಂಗೀತ, ಸಾಹಿತ್ಯ, ಧರ್ಮ, ತತ್ವಶಾಸ್ತ್ರ, ಜಾನಪದ ಮುಂತಾದವುಗಳು ರಾಷ್ಟ್ರೀಯತೆಯ ಇವೆಲ್ಲವೂ ಕೂಡ ಅಡಿಗಲ್ಲುಗಳಾಗಿವೆ. ಇತಿಹಾಸದ ಪರಂಪರೆಯ ಅರಿವು ವ್ಯಕ್ತಿಯನ್ನು ಹೆಮ್ಮೆಪಡುವಂತೆ ಮಾಡಿದೆ ಆದರೆ ಭಾರತದ ಇತಿಹಾಸದಲ್ಲಿ ಸಂಸ್ಕೃತಿಗೆ ಸಂಬಂಧಪಟ್ಟಂತೆ 19 ನೇ ಶತಮಾನದಲ್ಲಿ ನಡೆದ ಹಲವಾರು ಸಂಶೋಧನೆಗಳು ಭಾರತದ ರಾಷ್ಟ್ರೀಯತೆಗೆ ಭದ್ರವಾದ ತಳಪಾಯ ಅಥವಾ ಅಡಿಪಾಯ ಹಾಕಿದವು ಅದಲ್ಲದೆ ಶಿವಾಜಿ, ಕಿತ್ತೂರು ಚನ್ನಮ್ಮ, ಲಕ್ಷ್ಮೀಬಾಯಿ, ಬಾಲಗಂಗಾಧರ ತಿಲಕ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಸುಭಾಷ್ ಚಂದ್ರ ಭೋಸ್ ಮತ್ತು ಮಹಾತ್ಮ ಗಾಂಧೀಜಿಯವರ ಮುಂತಾದ ಹೋರಾಟಗಾರರ ಜೀವನ ಮತ್ತು ಸಾಧನೆಗಳು ನಮ್ಮ ಮನಸ್ಸಿನಲ್ಲಿ ರಾಷ್ಟ್ರಾಭಿಮಾನವನ್ನು ಮೂಡಿಸುತ್ತದೆ.
⭐History notes 2026:ಇತಿಹಾಸವು ಒಂದು ಸಮಾಜ ವಿಜ್ಞಾನಗಳ ಪ್ರಯೋಗ ಶಾಲೆ:
ಇತಿಹಾಸವು ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮನೋವಿಜ್ಞಾನ, ಧರ್ಮಶಾಸ್ತ್ರ, ತತ್ವಶಾಸ್ತ್ರ, ತರ್ಕಶಾಸ್ತ್ರ, ಭೂಗೋಳಶಾಸ್ತ್ರ ಮುಂತಾದವುಗ ಮುಂತಾದವುಗಳಿಗೆ ಬೇಕಾದ ಐತಿಹಾಸಿಕ ಉಪಯುಕ್ತ ಮಾಹಿತಿಯನ್ನು ಒದಗಿಸಿಕೊಡುತ್ತದೆ. ಇದರಿಂದಾಗಿ ಇತಿಹಾಸದ ಎಲ್ಲಾ ಸಾಮಾಜ ವಿಜ್ಞಾನಗಳ ಬೇರು. ಹಿಂದೆ ಸಮಾಜವಿಜ್ಞಾನಗಳು ಇತಿಹಾಸದ ಶಾಖೆಗಳಾಗಿ ಅಭ್ಯಸಿಸಲ್ಪಡುತ್ತಿದ್ದವು. ಇದರಿಂದಾಗಿ ಇತಿಹಾಸವು ಇವುಗಳಿಗೆ ಜ್ಞಾನವನ್ನು ಒದಗಿಸುವನಂತಹ ಪ್ರಯೋಗ ಶಾಲೆಯಾಗಿದೆ ವಿಶ್ವಸಂಸ್ಥೆಯಲಿ ಬಹುಪಾಲು ರಾಜಕೀಯ ಠರಾವುಗಳು ಇತಿಹಾಸದಿಂದ ಕಲಿತ ಪಾಠಗಳ ಮೇಲೆಯೇ ಅವಲಂಬಿತವಾಗಿವೆ. ಇದರಿಂದ ಪ್ರತಿಯೊಬ್ಬರು ಸಾಮಾಜದ ವಿಜ್ಞಾನಯಾಗಿ ಅಂತಿಮ ಅಭಿಪ್ರಾಯ ಕೈಗೊಳ್ಳುವಲ್ಲಿ ಇತಿಹಾಸದ ಆಧಾರಗಳ ಮೇಲೆಯೇ ಅವಲಂಬಿತನಾಗಿದ್ದಾನೆ.
History notes 2026:ಇತಿಹಾಸವು ಉದಾತ್ತ ಧೈಯಗಳನ್ನು ಬೆಳೆಸುತ್ತದೆ :
ಈ ಆಧುನಿಕ ಯುಗವು ಲೌಕಿಕ ಮತ್ತು ಉನ್ನತಿ ಸಾಧಿಸಿದೆಯೇ ಹೊರತು ಅಲೌಕಿಕ ಜಗತ್ತಿನಲ್ಲಿ ಅಲ್ಲ ಅಂದರೆ ಜನರ ಮನಸ್ಸಿನಲ್ಲಿ ಮೌಲ್ಯ ಹಾಗೂ ನೀತಿಗಳ ಬಗ್ಗೆ ಗೌರವ ಕುಸಿಯುತ್ತಿದೆ ಎಂದರ್ಥ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಹಿಂದಿನ ಮಹಾಪುರುಷರು ಪ್ರತಿಪಾದಿಸಿದ ಮೌಲ್ಯಗಳನ್ನು ಆಧುನಿಕ ಮಾನವ ಅಳವಡಿಸಿಕೊಳ್ಳಬೇಕಿದೆ. ಆಶೋಕ, ಏಸು ಕ್ರಿಸ್ತ, ಪ್ರವಾದಿ ಮಹಮ್ಮದ್, ಕನಕದಾಸ, ಡಾ: ಬಿ.ಆರ್.ಅಂಬೇಡ್ಕರ್, ಮದರ್ ಥೆರೆಸಾ, ಮುಂತಾದವರ ಮಹಾನ್ ಆದರ್ಶಗಳ ಬಗೆಗೆ ಇತಿಹಾಸವು ವಿವರಣೆ ನೀಡುತ್ತದೆ. ಉದಾತ್ತ ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಲು ಇತಿಹಾಸದ ಅಧ್ಯಯನವು ಕೂಡ ಮೂಲ ಸಹಕಾರಿಯಾಗಿದೆ. ಉದಾತ್ತ ಧೈಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸತ್ಯಸಂದತೆ, ನೀತಿ, ಅಹಿಂಸೆ, ಅನ್ಯರ ಸೇವೆ, ಪ್ರೀತಿ, ಕ್ಷಮಾಗುಣ, ದಯೆ, ಉತ್ತಮ ರಾಜನೀತಿ, ಧಾರ್ಮಿಕ ಸಹಿಷ್ಣುತೆ, ಮುಂತಾದವುಗಳನ್ನು ಇತಿಹಾಸವು ಆಧುನಿಕ ಪೀಳಿಗೆಗೆ ಬಳುವಳಿಯಾಗಿ ನೀಡಿದೆ. ಜಾರ್ಜ್ ಸಂತಯನನ ಪ್ರಕಾರ “ಇತಿಹಾಸವು ಉದಾತ್ತ ಧೈಯಗಳ ಗಣಿಯಾಗಿದೆ ಮತ್ತು ಸನ್ಮಾರ್ಗತೋರುವ ದಾರಿ ದೀಪವಾಗಿದೆ”.
⭐History notes 2026:ಇತಿಹಾಸವು ನಮ್ಮ ದೃಷ್ಟಿ ಕೋನವನ್ನು ವಿಸ್ತರಿಸುತ್ತದೆ:
ಇತಿಹಾಸದ ಅಧ್ಯಯನವು ತಮಗೆ ವಿವಿಧ ದೇಶಗಳ ಜನರು, ಸಂಪ್ರದಾಯ, ಸಂಸ್ಕೃತಿ ಮತ್ತು ನಾಗರಿಕತೆಗಳ ಬಗ್ಗೆ ಹೆಚ್ಚು ಜ್ಞಾನವನ್ನು ಸಂಪಾದಿಸಲು ಸಹಕರಿಯಾಗಿದೆ , ಆ ಮೂಲಕ ಮನುಕುಲದ ದೃಷ್ಟಿಕೋನವನ್ನು ವಿಶಾಲಗೊಳಿಸುತ್ತದೆ. ನಮ್ಮಇತಿಹಾಸದಲ್ಲಿ ದಾಖಲಾದ ಕಲೆ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಧರ್ಮಕ್ಕೆ ಸಂಬಂಧಿಸಿದ ವಿಚಾರಗಳು ವ್ಯಕ್ತಿಯ ಜ್ಞಾನದ ದಿಗಂತವನ್ನು ವಿಸ್ತರಿಸುತ್ತವೆ.
⭐ಇತಿಹಾಸವು ವಿಶ್ವಶಾಂತಿಯನ್ನು ಬೆಳೆಸುತ್ತದೆ:
ನಮ್ಮಈ ಜಗತ್ತು ಈಗಾಗಲೇ ಎರಡು ಮಹಾಯುದ್ಧಗಳ ದುಷ್ಪರಿಣಾಮಗಳನ್ನು ಕಂಡಿದೆ. ಆದರೆ ಭವಿಷ್ಯದಲ್ಲಿ ಇನ್ನೊಂದು ಬಾರಿ ಯುದ್ಧವಾದರೆ ಅದು ಇಡೀ ಪ್ರಪಂಚವನ್ನೇ ವಿನಾಶಗೊಳಿಸುತ್ತದೆ. ಈ ಸಂಸ್ಕೃತಿಯ ಅರಿವಿಲ್ಲದಿರುವುದು ಮತ್ತು ಸಂಕುಚಿತ ರಾಷ್ಟ್ರೀಯತೆ ಈ ಯುದ್ಧಗಳಿಗೆ ಕಾರಣವಾಗಿದೆಯೆಂದು ಇತಿಹಾಸವು ತೋರಿಸಿಕೊಟ್ಟಿದೆ.
ನಮ್ಮ ಈ ಜಗತ್ತಿನಲ್ಲಿ ಅಣ್ವಸ್ತ್ರಗಳು ಮತ್ತು ಯುದ್ಧ ಸಂಬಂಧಿತ ಉಪಕರಣಗಳನ್ನು ಹೊಂದಲು ಇವಾಗ ವಿಶ್ವದ ವಿವಿಧ ರಾಷ್ಟ್ರಗಳ ನಡುವೆ ಭಾರಿ ಪೈಪೋಟಿ ಸ್ಪರ್ಧೆ ಏರ್ಪಟ್ಟಿದೆ. ಆದರೆ ದೇಶಗಳ ನಡುವಣ ಸೌಹಾರ್ದಯುತ ಬಾಂಧವ್ಯ ವೃದ್ಧಿಗೆ ಪ್ರಪಂಚದ ಇತಿಹಾಸದ ಅಧ್ಯಯನ ಇಂದಿನ ಅಗತ್ಯವಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಹಾಗೂ ಸಾರಿಗೆ ಸಂಪರ್ಕಗಳ ಸುಧಾರಣೆಗಳಿಂದಾಗಿ ವಿಶ್ವವೇ ಒಂದು ಗ್ರಾಮವಾಗಿದೆ ಎಂದು ಹೇಳಬಹುದು ಆದರೆ ಯಾವುದೇ ಒಂದು ರಾಷ್ಟ್ರ ತನಗೆ ಬೇಕಾದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಬೇರೊಂದು ರಾಷ್ಟ್ರದ ಮೇಲೆ ಅವಲಂಬಿತವಾಗಿದೆ ಇದರಿಂದಾಗಿ ಜಗತ್ತಿನಲ್ಲಿರುವ ಎಲ್ಲಾ ರಾಷ್ಟ್ರಗಳು ಸ್ನೇಹಭಾವದಿಂದ ಪರಸ್ವರ ಅರ್ಥಮಾಡಿಕೊಳ್ಳುವಿಕೆಯ ಅಗತ್ಯವಿದೆ. ರಾಷ್ಟ್ರಗಳ ಸಂಘ ಮತ್ತು ವಿಶ್ವಸಂಸ್ಥೆಯ ಪ್ರಾಮುಖ್ಯತೆ ಮತ್ತು ಪ್ರಪಂಚದ ಶಾಂತಿ ಸ್ಥಾಪನೆಯಲ್ಲಿ ಅವುಗಳ ಪಾತ್ರವನ್ನು ಕುರಿತು ಇತಿಹಾಸ ವಿವರಣೆ ನೀಡಿದೆ. ಅದರಿಂದಾಗಿ ಇತಿಹಾಸವು ಇಲ್ಲಿ ಎಲ್ಲರೂ ಸಮಾನರೆಂದು ಬೋಧಿಸುತ್ತದೆ. ನಮ್ಮ ಸಮಾಜದಲ್ಲಿ ಜಾತಿ, ಪಂಥ ಮತ್ತು ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯವಿರಬಾರದು.
⭐History notes 2026:ಇತಿಹಾಸವು ವೃತ್ತಿಪರ ಉಪಯೋಗಗಳನ್ನು ಹೊಂದಿದೆ:
ಇತಿಹಾಸದಿಂದಾಗಿ ನಮಗೆ ಆಗುವ ಉಪಯೋಗಗಳು ಇದು ಸ್ಪರ್ಧಾತ್ಮಕ ಪ್ರಪಂಚ. IAS, IPS, IFS, KAS, ನಾ ಬರೆಯುವಂಥ ಪರೀಕ್ಷೆಗಳಲ್ಲಿ ಇತಿಹಾಸವನ್ನು ಐಚ್ಚಿಕ ವಿಷಯವಾಗಿ ಉಳಿದಿದೆ ಹಾಗಾಗಿ ಐತಿಹಾಸಿಕ ಜ್ಞಾನವು ಇಂದು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ವಕೀಲರಿಗೆ, ಪತ್ರಕರ್ತರಿಗೆ, ಆಡಳಿತಗಾರರಿಗೆ ಮತ್ತು ರಾಜನೀತಿಜ್ಞರಿಗೆ ಇತಿಹಾಸವು ತುಂಬಾ ಅತ್ಯವಶ್ಯವಾಗಿದೆ. ಆಡಳಿತ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ರಾಜಕಾರಣಿಗಳಿಗೆ ಐತಿಹಾಸಿಕ ಜ್ಞಾನ ಅಗತ್ಯ ಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ಬರುವ ಪುರಾತತ್ವ ಇಲಾಖೆಗಳಲ್ಲಿ ಸಾವಿರಾರು ಇತಿಹಾಸಕಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಕ್ತನಶಾಸ್ತ್ರಜ್ಞರು ಉತ್ಪನನಗಳನ್ನು ನಡೆಸಿ ಗತಕಾಲದ ಮೇಲೆ ಹೊಸ ಬೆಳಕು ಚೆಲ್ಲುತ್ತಾರೆ. ಪುರಾತನ ವಸ್ತುಗಳನ್ನು ಶೋಧಿಸುವುದು ಮಾತ್ರವಲ್ಲದೆ ಅವುಗಳನ್ನು ರಕ್ಷಿಸುತ್ತಾರೆ. ಇದಕ್ಕಾಗಿಯೇ ಸರ್ಕಾರ ವೃತ್ತಿಪರ ಇತಿಹಾಸಕಾರರನ್ನು ನೇಮಿಸುತ್ತದೆ. ವಸ್ತುಸಂಗ್ರಹಾಲಯ, ಪತ್ರಾಗಾರ ಹಾಗೂ ಪ್ರವಾಸೋದ್ಯಮ ಮತ್ತು ಅದರ ಸಂಬಂಧಿ ಕ್ಷೇತ್ರಗಳಲ್ಲಿ ಇತಿಹಾಸದ ವಿದ್ಯಾರ್ಥಿಗಳಿಗೆ ಹೊಸ ಹೊಸ ಅವಕಾಶಗಳಿವೆ. ಈ ರೀತಿ ಇತಿಹಾಸ ವೃತ್ತಿಪರ ಉಪಯೋಗಗಳನ್ನು ಹೊಂದಿದೆ.
⭐History notes 2026:ಇತಿಹಾಸವು ಪೂರ್ವಾಗ್ರಹಗಳನ್ನು ಹೋಗಲಾಡಿಸುತ್ತದೆ.
ಜಾತಿ, ಪಂಥ, ವರ್ಣ, ವರ್ಗ, ಭಾಷೆ ಮುಂತಾದವುಗಳಿಗೆ ಸಂಬಂಧಪಟ್ಟ ಪೂರ್ವಾಗ್ರಹಗಳನ್ನು ಹೋಗಲಾಡಿಸಲು ಇತಿಹಾಸ ಸಹಾಯಮಾಡುತ್ತದೆ. ಹಿಂದೆ ಜನರು ಮತ್ತು ದೇಶಗಳಿಗೆ ಈ ಪೂರ್ವಾಗ್ರಹಗಳು ತೀವ್ರ ತೊಂದರೆ ಉಂಟುಮಾಡಿದವು. ಇದರಿಂದಾಗಿ ಉಗ್ರ ರಾಷ್ಟ್ರೀಯತೆ ಎರಡೂ ಜಾಗತಿಕ ಯುದ್ಧಗಳಿಗೆ ಒಂದು ಪ್ರಮುಖ ಕಾರಣವಾಗಿದೆ ಎನ್ನಲಾಗುವುದು . ಈ ಯುದ್ಧಗಳಿಂದಗಿ ಮಿಲಿಯಾಂತರ ಜನರ ಸಾವಿಗೆ ಕಾರಣವಾಗಿ ಹೇಳಲಸಾಧ್ಯವಾದ ತೊಂದರೆಯನ್ನುಂಟುಮಾಡಿದವು. ಇದರಿಂದಾಗಿ ನಮ್ಮಲ್ಲಿ ರಾಷ್ಟ್ರಗಳ ನಡುವೆ ಶಾಂತಿ, ಸ್ನೇಹ ಮತ್ತು ಸಹಕಾರವಿರಬೇಕು. ಇದು ಇತಿಹಾಸದ ಅಧ್ಯಯನದಿಂದ ಮಾತ್ರ ಸಾಧ್ಯ
ಒಟ್ಟಾರೆಯಾಗಿ ಹೇಳಬೇಕೆಂದರೆ ಇತಿಹಾಸವು ವ್ಯಕ್ತಿಗಳಿಗೆ, ರಾಷ್ಟ್ರಗಳಿಗೆ ಹಾಗೂ ಇಡೀ ಪ್ರಪಂಚಕ್ಕೆ ಸ್ಫೂರ್ತಿದಾಯಕ ಸೆಲೆಯಾಗಿ ಉಳಿದಿದೆ ಇದು ಒಂದು ನಿರ್ದಿಷ್ಟವಾಗಿ ಎಲ್ಲಾ ಸಮಾಜವಿಜ್ಞಾನಗಳಿಗೆ ಮತ್ತು ಸಾಮಾನ್ಯವಾಗಿ ಇತರರ ಜ್ಞಾನದ ಶಾಖೆಗಳಿಗೆ ಪ್ರಯೋಗಶಾಲೆಯಾಗಿ ಸೇವೆಯನ್ನು ಸಲ್ಲಿಸುತ್ತದೆ. “ಉದಾಹರಣೆಗಳೊಂದಿಗೆ ಹೇಳಬೇಕೆಂದರೆ ಬೋಧಿಸಲ್ಪಡುವ ತತ್ವಜ್ಞಾನವೇ ಇತಿಹಾಸ”. ಇದು ಮಾನವನ ಎಲ್ಲಾ ಚಟುವಟಿಕೆಗಳ ಸಾರವಾಗಿದೇ ಇದರಿಂದಾಗಿ ಮಾನವ ಜನಾಂಗಕ್ಕೆ ಮಾರ್ಗದರ್ಶಿಯಾಗಿ ಸೇವೆಸಲ್ಲಿಸುತ್ತದೆ. ಸವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಹೇಳಿರುವಂತೆ “ಇತಿಹಾಸವನ್ನು ಮರೆತವರು ಎಂದಿಗೂ ಇತಿಹಾಸವನ್ನು ಸೃಷ್ಟಿಸಲಾರರು”.